ಕರ್ನಾಟಕದಲ್ಲಿ ರೈಲ್ವೆ ಉದ್ಯೋಗ ಆಕಾಂಕ್ಷಿಗಳಿಗೆ ಮತ್ತೊಂದು ಅಧಿಸೂಚನೆ ಪ್ರಕಟ: 190 ಹುದ್ದೆಗಳಿಗೆ ಅರ್ಜಿ ಆಹ್ವಾನ

Another notification published for railway job aspirants in Karnataka ಕರ್ನಾಟಕದಲ್ಲಿ ರೈಲ್ವೆ ಉದ್ಯೋಗ ಆಕಾಂಕ್ಷಿಗಳಿಗೆ ಮತ್ತೊಂದು ಅಧಿಸೂಚನೆ ಪ್ರಕಟ: 190 ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್ ಪದವಿ – ಈ ಶಿಕ್ಷಣದಲ್ಲಿ ಉತ್ತೀರ್ಣರಾದವರಲ್ಲಿ ಯಾರಾದರೂ ಸರ್ಕಾರಿ ಹುದ್ದೆಯನ್ನು ಪಡೆಯಲು ಆಸಕ್ತಿ ಹೊಂದಿದ್ದರೆ ಇಲ್ಲಿ ಉದ್ಯೋಗದ ಪ್ರಸ್ತಾಪವನ್ನು ಪರಿಶೀಲಿಸಿ. ಕೊಂಕಣ ರೈಲ್ವೆ ವಿವಿಧ 190 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ಬಗ್ಗೆ ಮಾಹಿತಿ ತಿಳಿದು ಅರ್ಜಿ ಸಲ್ಲಿಸಿ.
ಮುಖ್ಯಾಂಶಗಳು:
ಕೊಂಕಣ ರೈಲ್ವೆಯಲ್ಲಿ ಉದ್ಯೋಗ.

190 ಹುದ್ದೆಗಳಿದ್ದು, ಅ.06ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಹುದ್ದೆಗಳಿಗೆ ಅರ್ಹತೆ, ವೇತನ ಮತ್ತು ಇತರ ವಿವರಗಳನ್ನು ಇಲ್ಲಿ ಕಾಣಬಹುದು.
ಕೊಂಕಣ ರೈಲ್ವೇ ಹುದ್ದೆಯ ನೇಮಕಾತಿ 2024

10ನೇ ತರಗತಿ, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್ ಪದವಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ವಿಶೇಷವಾಗಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮತ್ತೊಂದು ರೈಲ್ವೇ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಇದೀಗ ಬಿಡುಗಡೆ ಮಾಡಲಾಗಿದೆ. ನೀವೂ ರೈಲ್ವೇ ಉದ್ಯೋಗದ ಆಕಾಂಕ್ಷಿಗಳಾಗಿದ್ದರೆ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.

WhatsApp Group Join Now
Telegram Group Join Now

ಸೀನಿಯರ್ ಸೆಕ್ಷನ್ ಇಂಜಿನಿಯರ್, ಟ್ರ್ಯಾಕ್ ಮೇಂಟೇನರ್, ಅಸಿಸ್ಟೆಂಟ್ ಲೋಕೋ ಪೈಲಟ್, ಟೆಕ್ನಿಷಿಯನ್, ಸ್ಟೇಷನ್ ಮಾಸ್ಟರ್, ಗೂಡ್ಸ್ ಟ್ರೈನ್ ಮ್ಯಾನೇಜರ್, ಪಾಯಿಂಟ್ಸ್ ಮ್ಯಾನ್, ಕಮರ್ಷಿಯಲ್ ಸೂಪರ್ ವೈಸರ್ ಇತ್ಯಾದಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

ರೈಲ್ವೆ ನೇಮಕಾತಿ 2024: ರೈಲ್ವೆ ಇಲಾಖೆಯ ಪ್ಯಾರಾಮೆಡಿಕಲ್ ವಿಭಾಗದಲ್ಲಿ 1376 ಹುದ್ದೆಗಳ ನೇಮಕಾತಿ

  • ಪೋಸ್ಟ್‌ಗಳ ಹೆಸರು ಪೋಸ್ಟ್‌ಗಳ ಸಂಖ್ಯೆ
  • ಹಿರಿಯ ವಿಭಾಗದ ಇಂಜಿನಿಯರ್ (ಎಲೆಕ್ಟ್ರಿಕಲ್) 5
  • ತಂತ್ರಜ್ಞ ಗ್ರೇಡ್ I, II (ಎಲೆಕ್ಟ್ರಿಕಲ್) 15
  • ಸಹಾಯಕ ಲೋಕೋ ಪೈಲಟ್ (ಎಲೆಕ್ಟ್ರಿಕಲ್) 15
  • ಹಿರಿಯ ವಿಭಾಗದ ಇಂಜಿನಿಯರ್ (ಸಿವಿಲ್) 5
  • ಟ್ರ್ಯಾಕ್ ಮೇಂಟೇನರ್ (ಸಿವಿಲ್) 35
  • ತಂತ್ರಜ್ಞ ಗ್ರೇಡ್ I, II (ಮೆಕ್ಯಾನಿಕಲ್) 20
  • ಸ್ಟೇಷನ್ ಮಾಸ್ಟರ್ (ಕಾರ್ಯಾಚರಣೆ) 10
  • ಗೂಡ್ಸ್ ಟ್ರೈನ್ ಮ್ಯಾನೇಜರ್ (ಆಪರೇಟಿಂಗ್) 5
  • ಪಾಯಿಂಟ್ಸ್ ಮ್ಯಾನ್ (ಆಪರೇಟಿಂಗ್) 60
  • ESTM-III ಸಿಗ್ನಲ್ ಮತ್ತು ದೂರಸಂಪರ್ಕ 15
  • ವಾಣಿಜ್ಯ ಮೇಲ್ವಿಚಾರಕ (ವಾಣಿಜ್ಯ) 5

ಕೊಂಕಣ ರೈಲ್ವೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು

KRCL – ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್‌ನ ಅಭಿವೃದ್ಧಿಗಾಗಿ ತಮ್ಮ ಭೂಮಿಯನ್ನು ಕಳೆದುಕೊಂಡ IDP ಗಳು.
ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾದಿಂದ ಅಭ್ಯರ್ಥಿಗಳು.
ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಗರಿಷ್ಠ ವಯಸ್ಸು 36 ವರ್ಷಗಳನ್ನು ಮೀರಬಾರದು.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು SC/ST ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ಹುದ್ದೆಗಳಿಗೆ ಅನುಗುಣವಾಗಿ ಎಸ್ ಎಸ್ ಎಲ್ ಸಿ, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್ ಪದವಿ ಪಾಸಾಗಿರಬೇಕು.
ಪೋಸ್ಟ್ವಾರು ಶೈಕ್ಷಣಿಕ ಅರ್ಹತೆಯನ್ನು ತಿಳಿಯಲು ಅಧಿಕೃತ ಅಧಿಸೂಚನೆಯನ್ನು ಓದಿ.

ಪೋಸ್ಟ್ ವೈಸ್ ಬೇಸಿಕ್ ಪೇ ವಿವರಗಳು

ಸೀನಿಯರ್ ಸೆಕ್ಷನ್ ಇಂಜಿನಿಯರ್ (ಎಲೆಕ್ಟ್ರಿಕಲ್) : ರೂ.44900
ತಂತ್ರಜ್ಞ ಗ್ರೇಡ್ I, II (ಎಲೆಕ್ಟ್ರಿಕಲ್) : ರೂ.19900.
ಸಹಾಯಕ ಲೋಕೋ ಪೈಲಟ್ (ಎಲೆಕ್ಟ್ರಿಕಲ್) : ರೂ.19900
ಸೀನಿಯರ್ ಸೆಕ್ಷನ್ ಇಂಜಿನಿಯರ್ (ಸಿವಿಲ್) : ರೂ.44900
ಟ್ರ್ಯಾಕ್ ಮೇಂಟೇನರ್ (ಸಿವಿಲ್) : ರೂ.18000.
ತಂತ್ರಜ್ಞ ಗ್ರೇಡ್ I, II (ಮೆಕ್ಯಾನಿಕಲ್): ರೂ.19900
ಸ್ಟೇಷನ್ ಮಾಸ್ಟರ್ (ಕಾರ್ಯಾಚರಣೆ) : ರೂ.35,400.
ಗೂಡ್ಸ್ ಟ್ರೈನ್ ಮ್ಯಾನೇಜರ್ (ಆಪರೇಟಿಂಗ್) : ರೂ.29,200.
ಪಾಯಿಂಟ್ಸ್ ಮ್ಯಾನ್ (ಆಪರೇಟಿಂಗ್) : ರೂ.18000.
ESTM-III ಸಿಗ್ನಲ್ ಮತ್ತು ದೂರಸಂಪರ್ಕ : ರೂ.19900
ವಾಣಿಜ್ಯ ಮೇಲ್ವಿಚಾರಕ (ವಾಣಿಜ್ಯ) : ರೂ.35,400.

ಅಧಿಸೂಚನೆ ಸಂಖ್ಯೆ. CO/P-R/01/2024
ಅಧಿಸೂಚನೆಯ ಬಿಡುಗಡೆಯ ದಿನಾಂಕ 16-08-2024
ಆನ್‌ಲೈನ್ ಅರ್ಜಿಯ ಸ್ವೀಕೃತಿಯ ಆರಂಭಿಕ ದಿನಾಂಕ 16-09-2024
ಆನ್‌ಲೈನ್ ಅರ್ಜಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ 06-10-2024 ರಾತ್ರಿ 11-59 ರಿಂದ.
ಅರ್ಜಿ ಸಲ್ಲಿಸಲು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್ https://konkanrailway.com/ ಗೆ ಭೇಟಿ ನೀಡಿ.

ಅರ್ಜಿ ಶುಲ್ಕ ರೂ.885. SC, ST, ಮಾಜಿ ಸೈನಿಕರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ.
ಉದ್ಯೋಗ ವಿವರಣೆ

ಪೋಸ್ಟ್ ಹೆಸರು ವಿವಿಧ ಪೋಸ್ಟ್ಗಳು

ವಿವರ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಅಧಿಸೂಚನೆ

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment