Ration card: ಇಂದಿನಿಂದ ಹೊಸ ಪಡಿತರ ಚೀಟಿ ಅರ್ಜಿ ಆರಂಭ, ಈ ಷರತ್ತುಗಳು ಅರ್ಜಿದಾರರಿಗೆ ಅನ್ವಯಿಸುತ್ತವೆ
ಇಂದಿನಿಂದಲೇ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು.
ಹೊಸ ಪಡಿತರ ಚೀಟಿಗೆ ಏಪ್ರಿಲ್ 1 ರಿಂದ ಅರ್ಜಿ
ಏಪ್ರಿಲ್ 1 ರಿಂದ ಹೊಸ ಪಡಿತರ ಚೀಟಿ ಅರ್ಜಿ ಆರಂಭ: ಪ್ರಸ್ತುತ ಪಡಿತರ ಚೀಟಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಪಡಿತರ ಚೀಟಿ ಬಹಳ ಮುಖ್ಯ.
ರಾಜ್ಯದಲ್ಲಿಯೂ ಕಾಂಗ್ರೆಸ್ ಸರಕಾರ ಐದು ಉಚಿತ ಖಾತ್ರಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರಸ್ತುತ ಈ ಯೋಜನೆಗಳ ಲಾಭ ಪಡೆಯಲು ಪಡಿತರ ಚೀಟಿ ಅತ್ಯಂತ ಮಹತ್ವದ್ದಾಗಿದೆ. ಯೋಜನೆ ಪಡೆಯಲು ಜನರು ಹೊಸ ಪಡಿತರ ಚೀಟಿ ಅರ್ಜಿಗಾಗಿ ಕಾಯುತ್ತಿದ್ದಾರೆ. ಇಂದಿನಿಂದ ಹೊಸ ಪಡಿತರ ಚೀಟಿಗಾಗಿ ಜನರು ಅರ್ಜಿ ಸಲ್ಲಿಸಬಹುದು.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಏಪ್ರಿಲ್ 1 ರಿಂದ ಆರಂಭ
ಇಂದಿನಿಂದ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಯಾಗಿದೆ
ಇಂದಿನಿಂದ ಅಂದರೆ ಏಪ್ರಿಲ್ 1ರಿಂದ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಹೊಸ ಪಡಿತರ ಚೀಟಿ ಪಡೆಯಲು ಇಚ್ಛಿಸುವವರು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು. ಹೊಸ ಪಡಿತರ ಚೀಟಿಗಾಗಿ ಬಂದಿರುವ 2,95,986 ಅರ್ಜಿಗಳನ್ನು ಮಾರ್ಚ್ 31ರೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಬಾಕಿ ಉಳಿದಿರುವ ಹೊಸ ಆದ್ಯತಾ ಪಡಿತರ ಚೀಟಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುವಂತೆ ಜಂಟಿ/ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಏಪ್ರಿಲ್ 1 ರಿಂದ ಹೊಸ ಪಡಿತರ ಚೀಟಿಗಾಗಿ ಹೊಸ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಆಹಾರ ಇಲಾಖೆ ಅಧಿಕೃತವಾಗಿ ತಿಳಿಸಿದೆ. ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಅರ್ಹತಾ ಮಾನದಂಡವನ್ನೂ ರಾಜ್ಯ ಸರ್ಕಾರ ಪ್ರಕಟಿಸಿದೆ. ಹೊಸ ಪಡಿತರ ಚೀಟಿಗೆ ಯಾರು ಅರ್ಜಿ ಸಲ್ಲಿಸಬಹುದು ಎಂಬ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ.
ಹೊಸ ಪಡಿತರ ಚೀಟಿಗೆ ಏಪ್ರಿಲ್ 1 ರಿಂದ ಅರ್ಜಿ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಷರತ್ತುಗಳೇನು…?
• ಕರ್ನಾಟಕದ ಖಾಯಂ ನಿವಾಸಿಗಳು ಅರ್ಜಿ ಸಲ್ಲಿಸಲು ಅರ್ಹರು.
•ಈಗಾಗಲೇ ಪಡಿತರ ಚೀಟಿ ಹೊಂದಿರುವವರು ಅರ್ಜಿ ಸಲ್ಲಿಸುವಂತಿಲ್ಲ.
• ಹೊಸದಾಗಿ ಮದುವೆಯಾದ ದಂಪತಿಗಳು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು.
• ಯಾವ ಪಡಿತರ ಚೀಟಿಯನ್ನು ಕುಟುಂಬಕ್ಕೆ ನೀಡಬೇಕು ಎಂಬುದನ್ನು ಕುಟುಂಬದ ಆದಾಯದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
•ನೀವು https://ahara.kar.nic.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅರ್ಜಿ ಸಲ್ಲಿಸಬಹುದು.
ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕಾಗುತ್ತವೆ?
* ಮತದಾರರ ಗುರುತಿನ ಚೀಟಿ
*ಆಧಾರ್ ಕಾರ್ಡ್
*ಮೊಬೈಲ್ ನಂ.
*ವಯಸ್ಸಿನ ಪ್ರಮಾಣ ಪತ್ರ
*ಚಾಲನಾ ಪರವಾನಿಗೆ
* ಸ್ವಯಂ ಘೋಷಿತ ಪ್ರಮಾಣಪತ್ರ
* ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
*ಮನೆಯ ಸದಸ್ಯರ ಬಗ್ಗೆ ಮಾಹಿತಿ