Arecanut price in kannada : ಅಡಿಕೆ ದರ ಸ್ಥಿರ; ಜು.15ರ ಅಡಿಕೆ ಧಾರಣೆಯ ಕನಿಷ್ಠ, ಗರಿಷ್ಠ ಬೆಲೆ ಎಷ್ಟಿದೆ..?

Arecanut price in kannada : ಅಡಿಕೆ ದರ ಸ್ಥಿರ; ಜು.15ರ ಅಡಿಕೆ ಧಾರಣೆಯ ಕನಿಷ್ಠ, ಗರಿಷ್ಠ ಬೆಲೆ ಎಷ್ಟಿದೆ..?

ದಾವಣಗೆರೆ: ಜಿಲ್ಲೆ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಲೆ (arecanut rate) ಸ್ಥಿರವಾಗಿದೆ.  (ಜು.15) ರಾಶಿ ಅಡಿಕೆ ಧಾರಣೆ ಗರಿಷ್ಠ‌ ಬೆಲೆ ಕ್ವಿಂಟಲ್ ಗೆ 51,400RS .ಗಳಿದ್ದು, ಕನಿಷ್ಠ ಬೆಲೆ 44,269RS.ಗಳಾಗಿದೆ. ಕಳೆದ ದಿನದ ಮಾರುಕಟ್ಟೆಗೆ ಹೋಲಿಸಿದ್ರೆ ಯಾವುದೇ ಏರಿಕೆಯಾಗದೇ ಸ್ಥಿರವಾಗಿದೆ. JUNE ಮೊದಲ ವಾರ 54000  ಗಡಿ ದಾಟಿದ ಬೆಲೆ, JULY .20ರಿಂದ ದಿನದಿಂದ ದಿನಕ್ಕೆ ಕುಸಿಯುತ್ತಲೇ ಬಂದಿತ್ತು.

2023 ರ ವರ್ಷ  ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57000 ತಲುಪಿತ್ತು. ಈ ವರ್ಷ MAY ತಿಂಗಳಲ್ಲಿ ಗರಿಷ್ಠ  55000 ತಲುಪಿತ್ತು. ಹೀಗಾಗಿ ಇನ್ಮುಂದೆ ಒಳ್ಳೆ RATE ಸಿಗುವ ಸಾಧ್ಯತೆ ಕಡಿಮೆ. ಯಾಕೆಂದರೆ ಮಾರುಕಟ್ಟೆಗೆ ಹೊಸ ಅಡಿಕೆ ಬರುವುದು ಶುರುವಾಗುತ್ತದೆ. ಹೀಗಾಗಿ ಇದೇ ಒಳ್ಳೆ RATE ಎಂದುಕೊಂಡು ಮಾರಾಟ ಮಾಡುವುದು ಉತ್ತಮ. ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದೆ. ಇನ್ನ ಎರಡ್ಮೂರು ದಿನ ಭಾರೀ ಮಳೆ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ.

ಬಿಸಿ ಗಾಳಿಯ ಅಲೆ ತಗ್ಗಿದ್ದು, ತಂಪಾದ ವಾತಾವರಣ ನಿರ್ಮಾಣವಾಗಿದೆ. ಕಳೆದ ಬಾರಿ ತೀವ್ರ ಬರದಿಂದ BOREWELL ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿತ್ತು. ಇದೀಗ ಸ್ವಲ್ಪ ಚೇತರಿಕೆ ಕಾಣುತ್ತಿವೆ. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

2024 ಜನವರಿ 15ರಂದು ರಾಶಿ ಅಡಕೆ ಗರಿಷ್ಠ ದರ 50,500 ರೂ.  ಗಡಿ ತಲುಪಿತ್ತು. ಫೆಬ್ರವರಿ ತಿಂಗಳಲ್ಲಿ‌ ಏಕಾಏಕಿ 48000ಕ್ಕೆ ಕುಸಿದಿತ್ತು. MARCH ತಿಂಗಳಲ್ಲಿ ಸ್ವಲ್ಪ ಚೇತರಿಕೆ ಕಂಡು 50000 ತಲುಪಿತ್ತು. APRIL ನಲ್ಲಿ ಗರಿಷ್ಠ 54000 ಗಡಿ ತಲುಪಿತ್ತು. ಮೇ ತಿಂಗಳಲ್ಲಿ ಗರಿಷ್ಠ ಈಗ 55000 ತಲುಪಿ, ಕುಸಿತ ಕಂಡಿತ್ತು. JUNE ತಿಂಗಳ ಎರಡನೇ ವಾರದಿಂದ ಮತ್ತೆ ಕುಸಿತ ಕಂಡು, ಜುಲೈನಲ್ಲಿ 51000ಕ್ಕೆ ಬಂದು ನಿಂತಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ JULY.15ರಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 44,269 RS., ಗರಿಷ್ಠ ಬೆಲೆ 51,400RS ಹಾಗೂ ಸರಾಸರಿ ಬೆಲೆ 49,390RS.ಗೆ ಮಾರಾಟವಾಗಿದೆ.

Leave a Comment