PM Kisan : ರೈತರಿಗೆ ಸಂತಸದ ಸುದ್ದಿ, ಕೇಂದ್ರದಿಂದ ಬಂಪರ್ ಉಡುಗೊರೆ! ಇಲ್ಲಿ ನೋಡಿ
FARMAR : ಇತ್ತೀಚೆಗೆ ಪ್ರಧಾನಿ ಮೋದಿ PM Kisan ನಿಧಿಯ 17 ನೇ ಕಂತನ್ನ ಬಿಡುಗಡೆ ಮಾಡಿದರು. ಈಗ 18ನೇ ಪ್ರಧಾನಿ ಕಿಸಾನ್ ಹಣ ಯಾವಾಗ ಬರುತ್ತದೆ ಎಂದು ರೈತರು ಕಾಯುತ್ತಿದ್ದಾರೆ. ಉತ್ತರ ಇಲ್ಲಿದೆ.
PM Kisan ಪ್ರಧಾನ ಮಂತ್ರಿ ಕಿಸಾನ್ ಯೋಜನೆಯು ಕೇಂದ್ರ ಸರ್ಕಾರವು ರೈತರಿಗೆ ಬಹಳ ಅನುಕೂಲಕರ ಯೋಜನೆಯಾಗಿದೆ. ಇದು ರೈತರಿಗೆ ಆರ್ಥಿಕ ಭರವಸೆ ನೀಡುವ ಮತ್ತು ಅವರ ಕೃಷಿಗೆ ಸಹಾಯ ಮಾಡುವ ಯೋಜನೆಯಾಗಿದೆ. ದೇಶದ ಲಕ್ಷಾಂತರ ರೈತರು ಈ ಯೋಜನೆ ಲಾಭ ಪಡೆಯುತ್ತಿದ್ದಾರೆ.
ಈ ಯೋಜನೆಯನ್ನು ಫೆಬ್ರವರಿ 2019 ರಲ್ಲಿ ಜಾರಿಗೆ ತರಲಾಯಿತು. ಅಂದಿನಿಂದ ರೈತರಿಗೆ ಬೆಳೆ ಸಹಾಯಧನವಾಗಿ ವಾರ್ಷಿಕ 6 ಸಾವಿರ ರೂ. ಕೇಂದ್ರ ಸರ್ಕಾರ ಈ 6 ಸಾವಿರ ರೂ.ಗಳನ್ನು ಮೂರು ಕಂತುಗಳಲ್ಲಿ ಅಂದರೆ ಎಕರೆಗೆ 2 ಸಾವಿರದಂತೆ ಪ್ರತಿ ಕಂತಿನಲ್ಲಿ ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಅವಧಿಯಲ್ಲಿ ರೈತರ ಖಾತೆಗೆ ಜಮಾ ಮಾಡಲಿದೆ.
ಇತ್ತೀಚೆಗಷ್ಟೇ ಪ್ರಧಾನಿ ಕಿಸಾನ್ ನಿಧಿಯ 17ನೇ ಕಂತನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದರು. ಈ ಹಣವನ್ನು 18 ಜೂನ್ 2024 ರಂದು ರೈತರ ಖಾತೆಗೆ ಜಮಾ ಮಾಡಲಾಗಿದೆ. ಈ ಯೋಜನೆಯ ಭಾಗವಾಗಿ ಒಟ್ಟು 9 ಕೋಟಿಗೂ ಹೆಚ್ಚು ರೈತರು ಪ್ರಯೋಜನ ಪಡೆದಿದ್ದಾರೆ ಎಂದು ಕೇಂದ್ರ ಸರ್ಕಾರ ಬಹಿರಂಗಪಡಿಸಿದೆ.
ಆದರೆ ಈಗ ರೈತರ ಗಮನ 18ನೇ ಕಂತಿನ ಹಣದತ್ತ ನೆಟ್ಟಿದೆ. ಹೀಗಾಗಿ ಈ ಫಂಡ್ ಯಾವಾಗ ಬರುತ್ತದೆ ಎಂಬ ಚರ್ಚೆಯೂ ಶುರುವಾಗಿದೆ. ಈ ಹಿನ್ನಲೆಯಲ್ಲಿ ಇತ್ತೀಚಿನ ಮಾಹಿತಿಯ ಪ್ರಕಾರ ನವೆಂಬರ್ ಮೊದಲ ವಾರದಲ್ಲಿ ಪಿಎಂ ಕಿಸಾನ್ ನಿಧಿಯ 18 ನೇ ಕಂತು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ.
ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಬಜೆಟ್ ಸಭೆಗಳಲ್ಲಿ 18ನೇ ಕಂತಿನ ಹಣದ ಕುರಿತು ಪಿಎಂ ಕಿಸಾನ್ ಮಹತ್ವದ ನಿರ್ಧಾರ ಕೈಗೊಳ್ಳಲಿದೆ. ಈ ನೆರವನ್ನು ರೈತರಿಗೆ ಯಾವುದೇ ವಿಳಂಬವಿಲ್ಲದೆ ಸಕಾಲದಲ್ಲಿ ಪಾವತಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ಈ ಮಧ್ಯೆ, PM Kisan ಯೋಜನೆ ಹಣ ಪಡೆಯಲು ರೈತರು ಪೂರ್ಣಗೊಳಿಸಬೇಕಾದ ಪ್ರಮುಖ ಕಾರ್ಯ E KYC.
PM Kisan ಮೊತ್ತವನ್ನು ಪೂರ್ಣಗೊಳಿಸಿದವರಿಗೆ ಮಾತ್ರ ಜಮಾ ಮಾಡಲಾಗುತ್ತದೆ. ನಿಮ್ಮ ಇ-ಕೆವೈಸಿಯನ್ನು ನೀವು ONLINEನಲ್ಲಿ ಪೂರ್ಣಗೊಳಿಸಬೇಕು. ಅಲ್ಲದೆ ನಿಮ್ಮ BANK ಖಾತೆಯನ್ನ AADHAR ಜೊತೆ LINK ಮಾಡಬೇಕು.
PM Kisan E-KYC ಗಾಗಿ PM Kisan ಅಧಿಕೃತ ಪೋರ್ಟಲ್ pmkisan.gov.in ಗೆ ಹೋಗಿ.. ಅಲ್ಲಿ ರಿಜಿಸ್ಟರ್ ಅನ್ನು ಕ್ಲಿಕ್ ಮಾಡಿ. ನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ, ಫೋನ್ ಸಂಖ್ಯೆ ಮತ್ತು ಸಂಪೂರ್ಣ ಭೂಮಿಯ ಮಾಹಿತಿಯನ್ನು ನಮೂದಿಸಿ.
ನಂತರ ನಿಮ್ಮ MOBILE ಸಂಖ್ಯೆಗೆ ಸ್ವೀಕರಿಸಿದ OTP ಅನ್ನ ನಮೂದಿಸಬೇಕು & ನೋಂದಣಿಗೆ ಮುಂದುವರಿಯಬೇಕು. BABK ಖಾತೆ ವಿವರಗಳನ್ನು ಸರಿಯಾಗಿ ನಮೂದಿಸಬೇಕು. ಆಧಾರ್‌ನಲ್ಲಿರುವಂತೆ ನಿಮ್ಮ ವೈಯಕ್ತಿಕ ವಿವರಗಳನ್ನು ಸರಿಯಾಗಿ ನಮೂದಿಸಿ. ಅದರ ನಂತರ ಸಲ್ಲಿಸು ಕ್ಲಿಕ್ ಮಾಡಿ. ಇದು ಆಧಾರ್ ಅಥೆಂಟಿಕೇಶನ್ ಸಕ್ಸಸ್ ಎಂದು ಹೇಳುತ್ತದೆ. ಅಷ್ಟೆ, ನಿಮ್ಮ ಇ-ಕೆವೈಸಿ ಅಪ್‌ಡೇಟ್ ಮುಗಿದಿದೆ.