Hero Honda Splendor Plus BIKE : ಹಳೆಯ ಸ್ಪ್ಲೆಂಡರ್ ಬೈಕ್ ಮಾಲೀಕರಿಗೆ ಗುಡ್ ನ್ಯೂಸ್!

Hero Honda Splendor Plus BIKE : ಹಳೆಯ ಸ್ಪ್ಲೆಂಡರ್ ಬೈಕ್ ಮಾಲೀಕರಿಗೆ ಗುಡ್ ನ್ಯೂಸ್!

Hero Honda Splendor Plus BIKE : ಆಟೋಮೊಬೈಲ್ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬದಲಾವಣೆ ಆಗುತ್ತಿದೆ. ಕಡಿಮೆ ಬೆಲೆ ಮತ್ತು ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್‌ಗಳಲ್ಲಿ ಹೀರೋ ಕೂಡ ಒಂದಾಗಿದ್ದು, ಇದರ ಮಾರಾಟದಲ್ಲಿ ಸಾಕಷ್ಟು ಪೈಪೋಟಿ ಇದೆ. ಮೊದಲಿಗೆ ಹೀರೋ ಹೋಂಡಾ ಒಂದೇ ಕಂಪನಿಯಾಗಿತ್ತು. ಇದೀಗ ಇವೆರಡೂ ವಿಭಿನ್ನವಾಗಿದ್ದು, ಇದಕ್ಕೆ ಹೀರೋ ಕಂಪನಿ ಶುಭ ಸುದ್ದಿಯೊಂದನ್ನು ನೀಡಿದೆ. ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

BAJAJ PLATINA ಬಜಾಜ್ ಪ್ಲಾಟಿನಾವನ್ನು ಹೊರತುಪಡಿಸಿ, ಭಾರತದ ಮಧ್ಯಮ ವರ್ಗದ ಮತ್ತು ಬಡ ಜನರನ್ನು ಕಡಿಮೆ ದರದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸಲು ಸ್ಪ್ಲೆಂಡರ್ ಬೈಕ್‌ಗಿಂತ ಹೆಚ್ಚು ಜನಪ್ರಿಯವಾಗಿರುವ ಬೇರಾವುದೇ ಬೈಕ್ ಇಲ್ಲ. ದ್ವಿಚಕ್ರ ವಾಹನ ಮಾರಾಟದಲ್ಲಿ ಸ್ಪ್ಲೆಂಡರ್ ಬೈಕ್ ಮೊದಲ ಸ್ಥಾನದಲ್ಲಿತ್ತು.

ಇದೇ ಕಾರಣಕ್ಕೆ RTO ಆರ್ ಟಿಒ ಇಲಾಖೆ ಸ್ಪ್ಲೆಂಡರ್ ಬಳಕೆದಾರರಿಗೆ ಶುಭ ಸುದ್ದಿಯೊಂದನ್ನು ನೀಡಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಮೈಲೇಜ್ ಪಡೆಯಲು ಮತ್ತು ಕಡಿಮೆ ವೆಚ್ಚದಲ್ಲಿ ಚಾಲನೆ ಮಾಡಲು ಬೈಕ್‌ಗಳಿಗೆ ಸಿಎನ್‌ಜಿ ಟೂಲ್ ಕಿಟ್‌ಗಳನ್ನು ಅಳವಡಿಸಲು ಅನೇಕ ಸ್ಥಳಗಳು ಕೆಲಸ ಮಾಡುತ್ತಿವೆ. ಆದರೆ, ಇದುವರೆಗೂ ಇದು ಕಾನೂನುಬದ್ಧ ಕೆಲಸವಾಗಿರಲಿಲ್ಲ.

ಆದರೆ ಈಗ RTO ಅದಕ್ಕೆ ಅಧಿಕಾರ ನೀಡಿದೆ ಎಂದು ತಿಳಿದುಬಂದಿದೆ. ಅಧಿಕೃತವಾಗಿ ಪ್ರಮಾಣೀಕರಿಸಿದ ಸಂಸ್ಥೆಗಳಲ್ಲಿ ಅಳವಡಿಸಲಾಗಿರುವ CNG ಟೂಲ್ ಕಿಟ್‌ಗಳೊಂದಿಗೆ ಹಳೆಯ ಸ್ಪ್ಲೆಂಡರ್ ಬೈಕ್‌ಗಳನ್ನು ಓಡಿಸಬಹುದು ಎಂಬ ಆದೇಶವನ್ನು RTO ಅಂಗೀಕರಿಸಿದೆ ಎಂದು ತಿಳಿದುಬಂದಿದೆ.

ಪೆಟ್ರೋಲ್ ಇಂಜಿನ್‌ಗೆ ಹೋಲಿಸಿದರೆ ಸಿಎನ್‌ಜಿ ಗ್ಯಾಸ್ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. ಪೆಟ್ರೋಲ್ ನಲ್ಲಿ 60 ರಿಂದ 65 ಕಿ.ಮೀ ಭರ್ಜರಿ ಮೈಲೇಜ್ ಪಡೆದರೆ, ಮತ್ತೊಂದೆಡೆ ಒಂದು ಕೆಜಿ ಸಿಎನ್ ಜಿಯಲ್ಲಿ 90 km mileage ಪಡೆಯುವುದರಲ್ಲಿ ಸಂಶಯವಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಈ ಹಿಂದೆ ಮಾತ್ರವಲ್ಲ, ಈಗಲೂ ಹಳೆಯ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಲೂ ಹೆಚ್ಚಿನ ಜನರು ಅದರ ಮೊರೆ ಹೋಗುತ್ತಾರೆ. ಹಾಗಾಗಿ ಈ ಹಳೆಯ ಬೈಕ್ ಗಳಲ್ಲಿ ಸಿಎನ್ ಜಿ ಎಂಜಿನ್ ಅಳವಡಿಸಲು ಆರ್ ಟಿಒ ನಿರ್ಧರಿಸಿದೆ. ಇದು ಜಾರಿಯಾದರೆ ಮೊದಲಿಗಿಂತ ಹೆಚ್ಚು ಮೈಲೇಜ್ ನೀಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Leave a Comment