Indian Department of Posts : ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಪೋಸ್ಟ್ ಆಫೀಸ್‌ನಲ್ಲಿ ಉತ್ತಮ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ.
SSLC ಉತ್ತೀರ್ಣರಾದವರಿಗೆ ಪೋಸ್ಟ್ ಆಫೀಸ್ ನೇಮಕಾತಿ
ಭಾರತೀಯ ಅಂಚೆ ಕಚೇರಿ ನೇಮಕಾತಿ 2024: ಭಾರತೀಯ ಅಂಚೆ ಕಚೇರಿಯು ಕಾಲಕಾಲಕ್ಕೆ ಖಾಲಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತಲೇ ಇರುತ್ತದೆ. ನಿರುದ್ಯೋಗಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಉದ್ಯೋಗ ಪಡೆಯಬಹುದು.
ಈ ಬಾರಿ ಭಾರತೀಯ ಅಂಚೆ ಇಲಾಖೆ ಎಸ್ ಎಸ್ ಎಲ್ ಸಿ ಪಾಸಾದವರಿಗೆ ಉತ್ತಮ ಉದ್ಯೋಗಾವಕಾಶ ಕಲ್ಪಿಸಿದೆ. SSLC ತೇರ್ಗಡೆಯಾದ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಿ ಉದ್ಯೋಗ ಪಡೆಯಬಹುದು. ಈ ಲೇಖನದಲ್ಲಿ ಪೋಸ್ಟ್ ಆಫೀಸ್ ಅರ್ಜಿ ಸಲ್ಲಿಕೆ ವಿವರಗಳು, ಹುದ್ದೆಗೆ ವೇತನ, ಅರ್ಜಿ ಸಲ್ಲಿಕೆ ವಿವರಗಳನ್ನು ನೀಡಲಾಗಿದೆ.
Indian Department of Posts ಭಾರತೀಯ ಅಂಚೆ ಕಚೇರಿ ನೇಮಕಾತಿ 2024
SSLC ಉತ್ತೀರ್ಣರಾದವರಿಗೆ ಪೋಸ್ಟ್ ಆಫೀಸ್ ನೇಮಕಾತಿ
ಪ್ರಸ್ತುತ, ಭಾರತೀಯ ಅಂಚೆ ಇಲಾಖೆಯು ಖಾಲಿ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 19 Staff car driver ಹುದ್ದೆಗಳು ಖಾಲಿಯಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮೇ 31 2024 ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರದ ಉದ್ಯೋಗ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಇಂದೇ ಅರ್ಜಿ ಸಲ್ಲಿಸಿ ಮತ್ತು ನೇಮಕ ಮಾಡಿಕೊಳ್ಳಿ
•ಭಾರತೀಯ ಅಂಚೆ ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ 10 ನೇ ತೇರ್ಗಡೆ ಹೊಂದಿರಬೇಕು.
•ಭಾರತೀಯ ಅಂಚೆ ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳ ವಯಸ್ಸು 31ನೇ ಮೇ 2024 ಕ್ಕೆ ಗರಿಷ್ಠ 56 ವರ್ಷಗಳನ್ನು ಮೀರಬಾರದು. ಮೀಸಲಾತಿಗೆ ಒಳಪಟ್ಟಿರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಭಾರತೀಯ ಪೋಸ್ಟ್ ಆಫೀಸ್ ಜಾಬ್ ಅಪ್ಲಿಕೇಶನ್
•Indian Department of Posts ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ನಿಗದಿತ ವೇತನ ಇಲ್ಲ. ಸಂಬಳವು ಅನುಭವ ಮತ್ತು ಕಾರ್ಯಕ್ಷಮತೆಯನ್ನು ಆಧರಿಸಿದೆ.
•Indian Department of Posts ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳನ್ನ ಬಿಹಾರದ ಪಾಟ್ನದಲ್ಲಿ post ಮಾಡಲಾಗುತ್ತದೆ.
•ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ 16/04/2024 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31ನೇ ಮೇ 2024.
•ನಿಮ್ಮ ಅರ್ಜಿಯನ್ನು ಈ ವಿಳಾಸಕ್ಕೆ ಪೋಸ್ಟ್ ಮಾಡಬಹುದು
ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕಚೇರಿ
ಬಿಹಾರ ವೃತ್ತ
ಪಾಟ್ನಾ-800001