TODAY GOLD RATE : ಭಾರೀ ಇಳಿಕೆ ಕಂಡ ಚಿನ್ನದ ಬೆಲೆ, ಇಲ್ಲಿದೆ ಸಂತಸದ ಸುದ್ದಿ!
ಚಿನ್ನವನ್ನು ಖರೀದಿಸಲು ಕಾಯುತ್ತಿರುವ ಮಹಿಳೆಯರಿಗೆ ಮತ್ತು ಚಿನ್ನವನ್ನು ಹೆಚ್ಚು ಇಷ್ಟಪಡುವವರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್. ಏಕೆಂದರೆ ಇದ್ದಕ್ಕಿದ್ದಂತೆ ಚಿನ್ನದ ಬೆಲೆ ಕಡಿಮೆಯಾಗಿದೆ. ಹಾಗಾದರೆ ಚಿನ್ನದ ಬೆಲೆ ಎಷ್ಟು ಕುಸಿದಿದೆ? ನೀವು ಈಗ ಚಿನ್ನವನ್ನು ಖರೀದಿಸಬಹುದೇ?
ಏಪ್ರಿಲ್ ತಿಂಗಳಿನಲ್ಲಿ ಚಿನ್ನಕ್ಕೆ ಭಾರೀ ಬೇಡಿಕೆಯಿದ್ದು, ಚಿನ್ನ ಕೂಡ ಭಾರೀ ಏರಿಕೆ ಕಂಡಿದೆ. ಆದರೆ ಈಗ ಚಿನ್ನದ ಬೆಲೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಇದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಹೀಗಾಗಿ ಚಿನ್ನ ಖರೀದಿಸಲು ಕಾದು ಕುಳಿತಿದ್ದ ಬಂಗಾರ ಪ್ರಿಯರಿಗೆ ಇದೀಗ ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಹಾಗಾದರೆ ಈಗ ಚಿನ್ನದ ಬೆಲೆ ಎಷ್ಟು? ಮುಂದೆ ಓದಿ.
2024 ರ ಏಪ್ರಿಲ್ 30 ರಂದು ಚಿನ್ನದ ಬೆಲೆ ಸ್ವಲ್ಪ ಕಡಿಮೆಯಾಗಿದೆ
ಯಾವ ನಗರದಲ್ಲಿ ಚಿನ್ನದ ಬೆಲೆ ಎಷ್ಟು?
ಹಾಗಾಗಿ ಈಗ ಭಾರತದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 66,550 ರೂಪಾಯಿಗಳಿಗೆ ತಲುಪಿದೆ.
ಅದೇ ರೀತಿ 24ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 72,600 ರೂ.,
100 ಗ್ರಾಂ ಬೆಳ್ಳಿ 8,400 ರೂ.
ಬೆಂಗಳೂರಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 66,550 ರೂ.ಗಳಾಗಿದ್ದರೆ
ಬೆಳ್ಳಿ ಬೆಲೆ 100 ಗ್ರಾಂಗೆ 8,350 ರೂ. ಅದೇ ರೀತಿ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ನೋಡಿದರೆ
ಬೆಂಗಳೂರಿನಲ್ಲಿ 66,550 ರೂ.,
ಚೆನ್ನೈನಲ್ಲಿ 67,400 ರೂ.,
ಮುಂಬೈನಲ್ಲಿ 66,550 ರೂ., ದೆಹಲಿಯಲ್ಲಿ 66,700 ರೂ.
ಇದು ಯುದ್ಧದ ಪರಿಣಾಮವೇ?
ಜಾಗತಿಕ ಯುದ್ಧವು ಪ್ರಾರಂಭವಾದಾಗ, ಅದು ಮೊದಲು ಪರಿಣಾಮ ಬೀರುವುದು ಚಿನ್ನ ಮತ್ತು ಪೆಟ್ರೋಲ್ ಮತ್ತು ಡೀಸೆಲ್. ಏಕೆಂದರೆ ಈ ವಿಷಯಗಳು ಜಾಗತಿಕ ಹಣಕಾಸು ವ್ಯವಸ್ಥೆಯ ಮೇಲೆ ದೊಡ್ಡ ಹಿಡಿತವನ್ನು ಹೊಂದಿವೆ. ಆದ್ದರಿಂದ ಯುದ್ಧ ಪ್ರಾರಂಭವಾದ ತಕ್ಷಣ, ಜನರು ತಮ್ಮ ಸಂಪತ್ತನ್ನು ಅಂದರೆ ಹವನವನ್ನು ಚಿನ್ನದ ರೂಪದಲ್ಲಿ ಉಳಿಸಲು ಪ್ರಾರಂಭಿಸುತ್ತಾರೆ. ಅದೇ ರೀತಿ ದೇಶಗಳು ಕೂಡ ಯುದ್ಧದ ಸಮಯ ಬಂದಾಗ ದೊಡ್ಡ ಪ್ರಮಾಣದ ಚಿನ್ನವನ್ನು ಖರೀದಿಸುತ್ತವೆ, ಏಪ್ರಿಲ್‌ನಲ್ಲಿಯೂ ಇದೇ ಆಗಿತ್ತು.
ಯುದ್ಧದ ಸಮಯದಲ್ಲಿ ಚಿನ್ನದ ಬೆಲೆಯು ಭಾರಿ ಏರಿಕೆಯನ್ನು ನೋಡುತ್ತದೆ ಮತ್ತು ಷೇರು ಮಾರುಕಟ್ಟೆಯಲ್ಲಿ ಇತರ ಹೂಡಿಕೆಗಳು ಕುಸಿಯುತ್ತವೆ. ಹಾಗಾಗಿ ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಸಿದ್ಧರಿದ್ದಾರೆ. ಇದರಿಂದಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಚಿನ್ನದ ಬೆಲೆ ಏರಿಕೆಗೆ ಇನ್ನೂ ಹಲವು ಕಾರಣಗಳಿವೆ. ಈಗ ಚಿನ್ನದ ಬೆಲೆ 75,000 ರೂ.ಗಳ ಗಡಿ ದಾಟಿದ್ದು, 1 ಲಕ್ಷದ ಗಡಿ ದಾಟುವ ನಿರೀಕ್ಷೆ ಇದೆ.